ಶನಿವಾರ, ಜುಲೈ 30, 2011
ಗುರುವಾರ, ಜೂನ್ 2, 2011
ನಿನ್ನೊಳಿದೆ ನನ್ನ ಮನವು....
ಸುಖವಾದ ಸಂಜೆಯಲಿ
ಒಬ್ಬಳೇ ಕುಳಿತಿರಲು ದಿಟ್ಟಿಸುತ್ತ
ತಂಗಾಳಿ ಹಿತವಾಗಿ
ಕೆನ್ನೆಗಳ ಸ್ಪರ್ಶಿಸಿದೆ
ಕಣ್ಣ ಹನಿಗಳ ಮೆಲ್ಲ ಒಣಗಿಸುತ್ತ
ಕಾಡುತಿಹ ನೆನಪುಗಳ
ದೂಡುವಾ ಯತ್ನದಲಿ
ಸಾಗುತಿಹೆ ಮೌನಡೆದೆ ಪಯಣಿಸುತ್ತ
ದಣಿದೆರೆಡು ನಯನಗಳ
ರೆಪ್ಪೆಗಳು ಅಪ್ಪಿಹವು
ಎದೆಯ ಭಾರವ ಮೆಲ್ಲ ಕರಗಿಸುತ್ತ
ನೀರಿನಲೆಗಳು ಹರಿದು
ಪಾದಗಳ ಚುಂಬಿಸಿವೆ
ಹಿತವಾಗಿ ಬೆರಳುಗಳ ಸ್ಪರ್ಶಿಸುತ್ತ
ದೂರದಾ ಚಂದಿರನ
ಹಾಲು ಬೆಳದಿಂಗಳದು
ತಂಪನೆರೆದಿದೆ ಮನವ ಬೆಳಗಿಸುತ್ತ
ಎಲ್ಲ ತರಹದ ಚಿಂತೆ
ಭೂತಕಾಲದ ಸಂತೆ
ಕೊಚ್ಚಿಹೋಗಿದೆ ಇಂದು ನೀರಿನತ್ತ
ಇಂದಿನಾ ಸಂಜೆಯದು
ನನಗಾಗಿ, ನಾನಿಲ್ಲಿ
ನಾನಾಗಿ ಜೀವಿಸಿಹೆ ನಸುನಗುತ್ತ
ನನ್ನ ಈ ಏಕಾಂತ
ನೆಮ್ಮದಿಯ ಹುಡುಕಾಟ
ಸುಖವಾಗಿ ಸವಿದಿಹೆನು ಅನುಭವಿಸುತ
ಕ್ಷಣಿಕ ಸುಖವಿದು ನಲ್ಲ
ಮತ್ತೆ ನಿನ್ನಯ ನೆನಪ
ಜಾಡು ಹಿಡಿದಿದೆ ಮನವು ಕನವರಿಸುತ
ಭಾನುವಾರ, ಏಪ್ರಿಲ್ 10, 2011
ಗುರುವಾರ, ಜನವರಿ 27, 2011
ಮಂಗಳವಾರ, ನವೆಂಬರ್ 16, 2010
ನಗೆ...
ವದನಾರವಿಂದದಲಿ ಮುದ್ದಾದ ಮುಗುಳುನಗೆ
ಮನಸೆಳೆದ ಈ ನಗೆಯ ಅರ್ಥಗಳು ನೂರು ಬಗೆ
ಒಂದು ನಗೆಯಲಿ ನೂರು ಮನ ಬೆಳಗುವಾ ನಲುಮೆ
ನಲುಮೆ ಒಲುಮೆಗಳಲ್ಲಿ ಸಂತಸದ ಸಿಹಿ ಚಿಲುಮೆ.... :-)
------------------------------ :-) :-)
ಈ ಕವನದಿಂದ ನನ್ನ ಭಾವಗಳ ಹೂಗುಚ್ಛವನ್ನು ಕವನಗಳೊಂದಿಗೆ ತೆರೆದಿಡುತ್ತಿದ್ದೇನೆ..... ಇನ್ನು ಮುಂದೆ ನನ್ನ ಇನ್ನಷ್ಟು ಕವನಗಳ ಅನಾವರಣ ಇಲ್ಲಿಯೇ.....
ಶುಭಾಷಯ.

ಭಾನುವಾರ, ಅಕ್ಟೋಬರ್ 31, 2010
ನನ್ನ ಅನಾವರಣ....
ಕವಿಗಳ ಎತ್ತರಕ್ಕೂ ಅಲ್ಲದ, ಸಾಮಾನ್ಯರ ಮಾತುಗಳ ಮಟ್ಟಕ್ಕೂ ಅಲ್ಲದ ವಿಶೇಷ ಕನ್ನಡ ನಮ್ಮದು. ಇದೇ ಭಾಷೆಯನ್ನು ಭಾವನೆಗಳ ಅಭಿವ್ಯಕ್ತಿಗೆ ಬಳಸಿಕೊಂಡು ಅಡ್ಡ ಕಸುಬೀ ಕವಿಗಳಾಗಿ ರೂಪುಗೊಂಡಿರುವ ನನ್ನಂಥ ಎಲ್ಲ ಬಂಧು ಬಾಂಧವರಿಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು. ದೊಡ್ಡ ಕವಿಗಳ ಎತ್ತರದ ಕನ್ನಡವನ್ನು ಓದಲು ಹೋಗಿ ಏನೂ ಅರ್ಥವಾಗದೆ ಕೊನೆಗೆ ಸಿನಿಮೀಯ ಸಾಹಿತ್ಯದ ಕನ್ನಡವನ್ನು ಮಹಾನ್ ಕನ್ನಡಿಗರಂತೆ ಆಸ್ವಾದಿಸುವ ನನ್ನೆಲ್ಲ ಮಿತ್ರರ ಗುಂಪಿಗೆ ನಾನೂ ಸೇರುತ್ತೇನೆ.
ನನ್ನ ಈ ಬರವಣಿಗೆ ನನ್ನ ಭಾವನಗಳನ್ನೂ, ನನ್ನ ಅರ್ಧಂಬರ್ಧ ಕವಿತ್ವವನ್ನೂ ಬಿಂಬಿಸುವ ಒಂದು ಸಣ್ಣ ಯತ್ನ. ಹೊಸಗನ್ನಡದ ಉಳಿವಿಗಾಗಿ ನನ್ನ ಪ್ರಾಮಾಣಿಕ ಪ್ರಯತ್ನ. ...

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)